   ಮೂಲದೊಡನೆ ಪರಿಶೀಲಿಸಿ

ಕೋಲ್ ಟಾರ್

ಬಿಟೂಮಿನಸ್ ಅಥವಾ ಮೃದು ಕಲ್ಲಿದ್ದಲನ್ನು ಗಾಳಿಯ ಅಭಾವದಲ್ಲಿ 1,0000-1,3000 ಸೆಂ.ನಲ್ಲಿ ಕಾಸಿದಾಗ ದೊರಕುವ ಶ್ಯಾನಶೀಲ ಕಪ್ಪುದ್ರವ. ಕಲ್ಲಿದ್ದಲಿನಿಂದ ಅನಿಲೇಂಧನಗಳನ್ನೇ ಪ್ರಧಾನವಾಗಿ ಪಡೆಯುತ್ತಿದ್ದ ಕಾಲದಲ್ಲಿ ಈ ವಸ್ತುವನ್ನು ಅನಿವಾರ್ಯವಾದ ಒಂದು ಪಿಡುಗು ಎಂದು ಭಾವಿಸಲಾಗಿತ್ತು. ಕೊಂಚಕಾಲದ ಮೇಲೆ ಇದನ್ನು ರಸ್ತೆಗಳಿಗೆ ಬಳಿಯಲು ಉಪಯೋಗಿಸಲಾಯಿತು. ಔದ್ಯೋಗಿಕವಾಗಿ ಅತಿಮುಖ್ಯವಾದ ಅನೇಕ ವಸ್ತುಗಳ ಆಕರವಾದ ಕಪ್ಪುಬಣ್ಣದ ಅಸಹ್ಯವಾಸನೆಯ ಈ ಅನಾಕರ್ಷಕ ವಸ್ತು ಈಗ ಆಗ್ರ್ಯಾನಿಕ್ ರಸಾಯನ ಶಾಸ್ತ್ರಜ್ಞನಿಗೆ ಕಲ್ಪತರುವಾಗಿ ಪರಿಣಮಿಸಿದೆ.

ನೂರು ಟನ್ ಕಲ್ಲಿದ್ದಲನ್ನು ಆಸವಿಸಿದರೆ ಮೂರು ಟನ್ ಟಾರು ದೊರೆಯುತ್ತದೆ. ಇದನ್ನು ಅನೇಕ ಹಂತಗಳಲ್ಲಿ ಒಂದಾದ ತರುವಾಯ ಇನ್ನೊಂದರಂತೆ ಶುದ್ಧೀಕರಿಸಲಾಗುವುದು. ಪ್ರಾರಂಭದಲ್ಲಿ ಟಾರನ್ನು ಆಸವಿಸಿ ದೊರೆತ ಪ್ರತಿ ಅಂಶವನ್ನೂ ಪ್ರತ್ಯಾಮ್ಲದಿಂದ ಸಾರೀಕರಿಸುತ್ತಾರೆ (ಎಕ್ಸ್‍ಟ್ರೇಕ್ಟ್). ಇದರಿಂದ ಸಾರರಿಕ್ತ ಆಮ್ಲಗಳಾದ ಫೀನಾಲುಗಳಂಥ ಆರೋಮ್ಯಾಟಿಕ್ ಹೈಡ್ರಾಕ್ಸಿ ಸಂಯುಕ್ತಗಳನ್ನು ಪ್ರತ್ಯೇಕಿಸಬಹುದು. ಮುಂದಿನ ಹಂತದಲ್ಲಿ ಅಂಶಗಳನ್ನು ಆಮ್ಲದಿಂದ ಸಾರೀಕರಿಸಿ ಸಾರಜನಕಯುತ ಪ್ರತ್ಯಾಮ್ಲಗಳನ್ನು ಹೊರತೆಗೆದು ಬಳಿಕ ಪುನ: ಆಸವಿಸಿ ಶುದ್ಧಿಗೊಳಿಸಲಾಗುವುದು.

ಟಾರನ್ನು ಆಸವಿಸಿದಾಗ ಮುಖ್ಯವಾಗಿ ಐದು ಅಂಶಗಳನ್ನು ಪಡೆಯಬಹುದು. ಇವನ್ನು ಪಟ್ಟಿಯಲ್ಲಿ ತೋರಿಸಲಾಗಿದೆ. ಇವನ್ನು ಅಂಶಿಕವಾಗಿ ಆಸವಿಸಿ ಮುಂದೆ ಕಾಣಿಸಿರುವ ಅನೇಕ ವಸ್ತುಗಳನ್ನು ಪಡೆಯಬಹುದು.

ಅಂಶ
ಹೆಸರು
ಉಷ್ಣತೆ
ಇಳುವರಿ (ಒಂದು
ಟನ್ ಟಾರಿಗೆ)

I
II

III

Iಗಿ

ಗಿ

ಲಘುತೈಲ ಅಥವಾ ಕಚ್ಚಾನ್ಯಾಫ್ತ
ಮಧ್ಯತೈಲ ಅಥವಾ ಕಾರ್ಬಾಲಿಕ್ ಎಣ್ಣೆ
ಭಾರತೈಲ ಅಥವಾ ಕ್ರಿಯೋಸೋಟ್ ಎಣ್ಣೆ
ಆಂಥ್ರಸೀನ್ ಎಣ್ಣೆ ಅಥವಾ ಹಸಿರು ಎಣ್ಣೆ
ಪಿಚ್

1700 ಸೆಂ.ವರೆಗೆ
1700-2300 ಸೆಂ.

230-270 ಸೆಂ.
       
 2700 ಸೆಂ.ಮೇಲೆ
   ಅವಶೇಷ  
12 ಗ್ಯಾಲನ್‍ಗಳು
      "

" 
        
         
"
  II ಹಂಡ್ರಡ್ ವೆಯಿಟ್

ಟಾರಿನಿಂದ ದೊರಕುವ ಮುಖ್ಯವಾದ ಹೈಡ್ರೊಕಾರ್ಬನ್ನುಗಳು ಇವು: ಬೆಂಜಿóನ್ (ಕುದಿಬಿಂದು 800 ಸೆಂ.); ಟಾಲೀನ್ (ಕು.ಬಿಂ.1100 ಸೆಂ.), ಮೆಟಾಅರ್ಥೋ ಮತ್ತು ಪ್ಯಾರಾ ಕ್ಸೈಲೀನುಗಳ ಮಿಶ್ರಣ (ಕು.ಬಿ.1440 ಸೆಂ,1390 ಸೆಂ. 1380 ಸೆಂ.), ಇಂಡೀನ್ (ಕು.ಬಿ.1810 ಸೆಂ.), ನ್ಯಾಫ್ತಲೀನ್ (ಕು.ಬಿಂ.2180 ಸೆಂ. ದ್ರವಿಸುವ ಬಿಂದು 800 ಸೆಂ.), ಆಲ್ಫ ಮೀಥೈಲ್ ನ್ಯಾಫ್ತಲೀನ್ (ಕು.ಬಿಂ.2450 ಸೆಂ.), ಬೀಟ ಮೀಥೈಲ್ ನ್ಯಾಫ್ತಲೀನ್ (ಕು.ಬಿ.2410 ಸೆಂ. ದ್ರ..ಬಿಂ.320 ಸೆಂ.), ಡೈಫೀನೈಲ್ (ಕು.ಬಿಂ.2540 ಸೆಂ.ದ್ರ.ಬಿಂ.690 ಸೆಂ.), ಅಸಿನ್ಯಾಫ್ತಲೀನ್ (ದ್ರ.ಬಿಂ.950 ಸೆಂ.), ಫ್ಲೂರಿನ್ (ದ್ರ.ಬಿಂ.1140 ಸೆಂ.), ಫೆನಾಂಥ್ರೀನ್ (ದ್ರ.ಬಿಂ.1010 ಸೆಂ.), ಆಂಥ್ರಸೀನ್ (ದ್ರ.ಬಿಂ.2160 ಸೆಂ.), ಪ್ಲುರಾಂಥೀನ್ (ದ್ರ..ಬಿಂ.1100 ಸೆಂ.), ಪೈರೀನ್ (ದ್ರ.ಬಿಂ.1500 ಸೆಂ.) ಮತ್ತು ಕ್ರೈಸೀನ್ (ದ್ರ.ಬಿಂ.2550 ಸೆಂ.) ಇವೆಲ್ಲ ಆರೋಮ್ಯಾಟಿಕ್ ಅಥವಾ ಆವರ್ತಸಂಯುಕ್ತಗಳು. ಇವಲ್ಲದೆ ಟಾರಿನಿಂದ ಸೈಕ್ಲೋಪೆಂಟಾಡಯೀನನ್ನು (ದ್ರ.ಬಿಂ.410 ಸೆಂ.) ಔದ್ಯೋಗಿಕ ಪರಿಮಾಣದಲ್ಲಿ ಪಡೆಯಬಹುದು. ಈ ವಸ್ತು ಮತ್ತು ಬೆಂಜೀóನ್ ಮತ್ತು ಟಾಲೀನುಗಳು ಲಘು ತೈಲಾಂಶದಲ್ಲಿ ದೊರೆಯುತ್ತದೆ. ಅಂಶಿಕ ಆಸವನದಿಂದ ಬೆಂಜೀóನ್ ಮತ್ತು ಟಾಲೀನುಗಳನ್ನು ಪ್ರತ್ಯೇಕಿಸಬಹುದು. ಮೂರು ಬಗೆಯ ಕ್ಸೈಲೀನುಗಳ ಕುದಿಬಿಂದುಗಳಲ್ಲಿ ಅಷ್ಟೇನೂ ಅಂತರವಿಲ್ಲದ್ದರಿಂದ ಅವನ್ನು ಪರಸ್ಪರವಾಗಿ ಅಂಶಿಕ ಅಸವನದಿಂದ ಪ್ರತ್ಯೇಕಿಸುವುದು ಸುಲಭವಲ್ಲ. ಟಾರಿನಲ್ಲಿ ದೊರಕುವ ವಸ್ತುಗಳಲ್ಲೆಲ್ಲ ಅತ್ಯಧಿಕ ಮೊತ್ತದಲ್ಲಿರುವ ಸಂಯುಕ್ತ ನ್ಯಾಫ್ತಲೀನ್ ಟಾರಿನಲ್ಲಿ (ಪ್ರತಿಶತ 11 ಭಾಗ). ಕೋಲ್ ಟಾರಿನ ಉದ್ಯಮದ ಪ್ರಾರಂಭದಲ್ಲಿ ಆಂಥ್ರಸೀನಿನ ತಯಾರಿಕೆಗೆ ಹೆಚ್ಚು ಪ್ರಾಶಸ್ತ್ಯವನ್ನು ನೀಡಲಾಯಿತು. ಈ ಸಂಯುಕ್ತದಿಂದ ಪ್ರಥಮಬಾರಿಗೆ ಅಲಿಸರೀನ ಎಂಬ ನೈಸರ್ಗಿಕವಾಗಿ ದೊರೆಯುವ ವರ್ಣ ವಸ್ತುವನ್ನು ಸಂಶ್ಲೇಷಿಸಲಾಯಿತು. ಇಂಡಾಂಥ್ರೋನ್ ವರ್ಣವಸ್ತುಗಳ ಸಂಶೋಧನೆಯ ಫಲವಾಗಿ ಆಂಥ್ರಾಸೀನಿನ ಉಪಯೋಗ ಮತ್ತಷ್ಟು ಹೆಚ್ಚಿತು. ವಾಸ್ತವವಾಗಿ ಅಧಿಕ ಉಷ್ಣತೆಯಲ್ಲಿ ಬಾಷ್ಪಶೀಲವಾಗುವ ಅಂಶಗಳನ್ನು ಆಂಥ್ರಾಸೀನಿನ ಸಲುವಾಗಿಯೇ ಬಳಸಲಾಗುತ್ತಿತ್ತು. ಪಟ್ಟಿಮಾಡಲಾಗಿರುವ ಉಳಿದ ಹೈಡ್ರೊಕಾರ್ಬನುಗಳನ್ನು ಪ್ರತ್ಯೇಕಿಸುವುದು ಸುಲಭವಲ್ಲ. ಇವು ಇತ್ತೀಚೆಗೆ ಮಾತ್ರ ಮಾರುಕಟ್ಟೆಯಲ್ಲಿ ದೊರೆಯುತ್ತಿವೆ.

	ಟಾರಿನಿಂದ ದೊರೆಯುವ ಸಾರಜನಕಯುತ ಪ್ರತ್ಯಾಮ್ಲಗಳಲ್ಲಿ ಪಿರಿಡಿನ್ (ಕು.ಬಿಂ.1150 ಸೆಂ.), ಆಲ್ಫ ಪಿಕೋಲಿನ್ (ಕು.ಬಿಂ.1290 ಸೆಂ.), ಬೀಟ ಪಿಕೋಲಿನ್ (ಕು.ಬಿಂ.1430 ಸೆಂ.), ಗಾಮ ಪಿಕೋಲಿನ್ (ಕು.ಬಿಂ.1430 ಸೆಂ.), ಕ್ವಿನೋಲಿನ್ (ಕು. ಬಿಂ. 2380 ಸೆಂ.), ಐಸೋಕ್ವಿನೋಲಿನ್ (ಕು. ಬಿಂ. 2420 ಸೆಂ),ಕ್ವಿನಾಲ್ಡೀನ್ (ಕು.ಬಿಂ.2470 ಸೆಂ.), ಇಂಡೋಲ್ (ದ್ರ.ಬಿಂ. 520 ಸೆಂ.), ಅಕ್ರಿಡಿನ್ (ದ್ರವನ ಬಿಂದು 1110 ಸೆಂ.) ಮತ್ತು ಕಾರ್ಬಸೋಲ್ (ದ್ರ.ಬಿಂ.2380 ಸೆಂ.) ಮುಖ್ಯವಾದವು. ಇಂಡೋಲ್ ಮತ್ತು ಕಾರ್ಬಸೋಲುಗಳ ವಿನಾ ಮಿಕ್ಕೆಲ್ಲವೂ ಸಾರರಿಕ್ತ ಪ್ರತ್ಯಾಮ್ಲಗಳಂತೆ ವರ್ತಿಸುತ್ತವೆ. ಆಕ್ಸಿಜನ್ನನ್ನು ಒಳಗೊಂಡಿರುವ ಅನೇಕ ವಸ್ತುಗಳನ್ನು ಸಹ ಟಾರಿನಿಂದ ಪಡೆಯಬಹುದು. ಇವುಗಳ ಪೈಕಿ ಫೀನಾಲ್ (ಕು.ಬಿಂ.1810 ಸೆಂ.), ಆರ್ಥೋಕ್ರೆಸಾಲ್ (ಕು.ಬಿಂ.1910 ಸೆಂ.), ಮೆಟಕ್ರೆಸಾಲ್ (ಕು.ಬಿಂ.2010 ಸೆಂ.) ಮತ್ತು ಪ್ಯಾರಾಕ್ರೆಸಾಲ್ (ಕು.ಬಿಂ.2010 ಸೆಂ). ನಾಲ್ಕು ಬಗೆಯ ಕ್ಸೈಲಿನಾಲುಗಳು. ಆಲ್ಫ ನ್ಯಾಫಾಲ್ (ದ್ರ. ಬಿಂ. 940 ಸೆಂ.) ಬೀಟ ನ್ಯಾಫ್ತಾಲ್ (ದ್ರ.ಬಿಂ.1220 ಸೆಂ.) ಮತ್ತು ಡೈಫೆನೀಲೀನ್ ಆಕ್ಸೈಡ್ (ದ್ರ.ಬಿಂ.800 ಸೆಂ.) ಮುಖ್ಯವಾದವು. ಇವು ಸಾರರಿಕ್ತ ಆಮ್ಲಗಳಾದ್ದರಿಂದ ಟಾರನ್ನು ಅಥವಾ ಅದರ ಅಂಶಗಳನ್ನು ಸಾರರಿಕ್ತ ಪ್ರತ್ಯಾಮ್ಲಗಳಿಂದ ಪ್ರತ್ಯೇಕಿಸಬಹುದು. ಹೀಗೆ ದೊರೆತ ಮಿಶ್ರಣವನ್ನು ಔದ್ಯೋಗಿಕ ಗಾತ್ರದಲ್ಲಿ ಪುನ: ಆಸವಿಸಿ ಫೀನಾಲ್ ಅರ್ಥೋಕ್ರೇಸಾಲ್, ಮೆಟಾಕ್ರೇಸಾಲ್ ಮತ್ತು ಪ್ಯಾರಾಕ್ರೇಸಾಲುಗಳ ಮಿಶ್ರಣವನ್ನು ಪಡೆಯಬಹುದು. ಕ್ರೇಸಾಲ್ ಮತ್ತು ಕ್ಸೈಲಿನಾಲುಗಳನ್ನು ಪ್ರತ್ಯೇಕಿಸಲು ಎಚ್ಚರಿಕೆಯಿಂದ ಆಯ್ದ ತೆರದಲ್ಲಿ ಒತ್ತರಿಸಿ ಬಳಿಕ ಸಲ್ಫೋನೀಕರಣ ಮಾಡಬೇಕು.

	ಟಾರಿನಿಂದ ಮೇಲೆ ತಿಳಿಸಿರುವ ನಲವತ್ತು ವಸ್ತುಗಳಲ್ಲದೆ ನೂರಕ್ಕೂ ಮಿಗಿಲಾಗಿ ಇತರ ಸಂಯುಕ್ತಗಳು ದೊರೆತಿವೆ. ಇವನ್ನು ಪ್ರತ್ಯೇಕಿಸುವುದು ಶ್ರಮಸಾಧ್ಯವಾದ ಕೆಲಸ. ಹೀಗಾಗಿ ಇವು ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ದೊರೆಯುವುದಿಲ್ಲ. ಬೆಂಜನಾಯ್ಡ್ ಸಂಯುಕ್ತಗಳು ಸ್ವಯಂ ಟಾರಿನಲ್ಲಿರುವುದಿಲ್ಲ. ಹೆಚ್ಚಿನ ಉಷ್ಣತೆಗೆ ಟಾರನ್ನು ಕಾಸಿದಾಗ ಇವು ಉತ್ಪತ್ತಿಯಾಗುತ್ತವೆ. ಟಾರನ್ನು ಪಡೆಯುವ ವಿಧಾನದಲ್ಲಿ ಕಲ್ಲಿದ್ದಲನ್ನು 1,0000-1,3000 ಸೆಂ. ವರೆಗೆ ಕಾಸಿದಾಗ ಕಲ್ಲಿದ್ದಲಿನಲ್ಲಿರುವ ಅನೇಕ ಬೃಹದಣುಗಳು ಒಡೆದು ಅವುಗಳ ತುಣುಕುಗಳು ಹಂತಶ್ರೇಣಿಗಳಲ್ಲಿ ಪುನಃ ಸಂಯೋಜಿತವಾಗಿ ನಾನಾಬಗೆಯ ಸಂಯುಕ್ತಗಳು ಉತ್ಪತ್ತಿಯಾಗುತ್ತವೆ ಎಂದು ಭಾವಿಸಲಾಗಿದೆ. ಕಲ್ಲಿದ್ದಲನ್ನು ನಿರ್ವಾತ ಸ್ಥಿತಿಯಲ್ಲಿ ಅಲ್ಪತರ ಉಷ್ಣತೆಯಲ್ಲಿ ಆಸವಿಸಿ ಟಾರನ್ನು ಪಡೆಯುವ ಪ್ರಯತ್ನಗಳು ನಡೆದಿವೆ. ಹೀಗೆ ಪಡೆದ ಟಾರಿನಲ್ಲಿ ಪ್ಯಾರಾಫಿನ್ ಶ್ರೇಣಿಗೆ ಸೇರಿದ ಸಂಯುಕ್ತಗಳು ಮತ್ತು ಹೈಡ್ರೊ ಆರೋಮ್ಯಾಟಿಕ್ ಸಂಯುಕ್ತಗಳು ಅಧಿಕ ಮೊತ್ತದಲ್ಲಿರುತ್ತವೆ.

	ಟಾರಿನಿಂದ ಪಡೆದ ಸಂಯುಕ್ತಗಳಿಂದ ಅನೇಕ ಬಗೆಯ ವರ್ಣವಸ್ತುಗಳು, ಔಷಧಿಗಳು ಮತ್ತು ನಾನಾ ಬಗೆಯ ಆಗ್ರ್ಯಾನಿಕ್ ವಸ್ತುಗಳನ್ನು ತಯಾರಿಸಲಾಗುತ್ತಿದೆ. ಟಾರನ್ನು ಅಥವಾ ಅದರ ಅಂಶಗಳನ್ನು ಜಲರೋಧೀ (ವಾಟರ್ ಪ್ರೂಫ್) ಸಾಮಗ್ರಿಗಳನ್ನು ಮತ್ತು ರಂಗುಗಳನ್ನು (ಪೆಯಿಂಟ್) ತಯಾರಿಸಲು, ರಸ್ತೆಗಳಿಗೆ ಮತ್ತು ಕೊಳವೆಗಳಿಗೆ ಬಳಿಯಲು, ಮೇಲ್ಚಾವಣಿಗೆ ರಕ್ಷಣೆ ನೀಡಲು ಉಪಯೋಗಿಸುತ್ತಾರೆ. ವಿದ್ಯುನ್ನಿರೋಧಕವಾಗಿಯೂ ಕ್ರಿಮಿನಾಶಕಗಳ ತಯಾರಿಕೆಯಲ್ಲೂ ಇದನ್ನು ಬಳಸಲಾಗಿದೆ.

		ಕೋಲ್ ಟಾರನ್ನು ಆಸವಿಸಿ ಆವಿಯಾಗುವ ಅಂಶಗಳನ್ನು ಪ್ರತ್ಯೇಕಿಸಿದ ತರುವಾಯ ಕಂದು¨ಣ್ಣದ ಇಲ್ಲವೆ ಕಪ್ಪುಬಣ್ಣದ ಹುಡಿಯಂಥ ಪದಾರ್ಥ ಹಿಂದುಳಿಯುತ್ತದೆ. ಸಾಮಾನ್ಯವಾಗಿ ದೊರೆಯುವ ಟಾರಿನಲ್ಲಿ 48%-65% ಭಾಗದಷ್ಟಿರುವ ಈ ವಸ್ತುವಿನಲ್ಲಿ ಪಾಲಿನ್ಯೂಕ್ಲಿಯರ್ ಸಂಯುಕ್ತಗಳ ಪ್ರಮಾಣವೇ ಹೆಚ್ಚು. ಇದಕ್ಕೆ ಅಪೇಕ್ಷಣೀಯವಾದ ಕೆಲವು ಗುಣಗಳಿವೆ. ಇದರ ಶ್ಯಾನತೆ ಕಾಸಿದಾಗ ಕೂಡ ತಗ್ಗುವುದಿಲ್ಲ. ನೀರನ್ನು ನಿರೋಧಿಸುತ್ತದೆ. ಕಾಸಿದಾಗ ವಿಭಜನೆಯಾಗದೆ ಸ್ಥಿರವಾಗಿರುತ್ತದೆ ಮತ್ತು ಸೂಕ್ಷ್ಮಜೀವಿಗಳಿಂದ ಜೀರ್ಣವಾಗುವುದಿಲ್ಲ. ಇವೆಲ್ಲ ಗುಣಗಳಿಂದಾಗಿ ಇದು ಬಹಳ ಉಪಯುಕ್ತ ವಸ್ತುವೆನಿಸಿದೆ. ಇಂಗಾಲದ ಎಲೆಕ್ಟ್ರೋಡುಗಳನ್ನು ಬಂಧಿಸಲು; ರಂಗುಗಳು ಮತ್ತು ಲೇಪನಗಳ ಅಡಿಪಾಯದಂತೆ; ವಿದ್ಯುತ್ ವಾಹಕಗಳನ್ನು ಒಯ್ಯುವ ಮತ್ತು ಒಳಚರಂಡಿ ವ್ಯವಸ್ಥೆಯಲ್ಲಿ ಬಳಸುವ ಕೊಳವೆಗಳ ರಕ್ಷಣೆಗಾಗಿ; ಎರಕಹೊಯ್ಯುವ ಉದ್ಯಮದಲ್ಲಿ; ಕುಲುಮೆಗಳನ್ನು ಕಟ್ಟುವಾಗ ಬಳಸುವ ಉಷ್ಣನಿರೋಧಿ ಇಟ್ಟಿಗೆಗಳನ್ನು ಕೂಡಿಸಲು-ಇವೇ ಮುಂತಾದ ಕೆಲಸಗಳಲ್ಲಿ ಇದನ್ನು ಉಪಯೋಗಿಸುತ್ತಾರೆ. 		(ಎಚ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ